ಕಾರ್ಯಕ್ರಮಗಳು

ಕನ್ನಡ ಕೂಟದ ಚಟುವಟಿಕೆಗಳು

ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಮಕ್ಕಳು, ವಯಸ್ಕರು ಕಲಿತು ಭಾಷಾಜ್ಞಾನ ಮತ್ತು ಅಭಿಮಾನವನ್ನು ಬೆಳೆಸಿಕೊಳ್ಳುವುದರ  ಜೊತೆಗೆ  ನಮ್ಮ  ಸಂಸ್ಕೃತಿ ಆಚರಣೆಯನ್ನು ಅರಿತು ಬೆಳೆಸಲು  ನಾವೆಲ್ಲ ಒಂದಾಗಬೇಕು. ಇದನ್ನು ಪ್ರೋತ್ಸಾಹಿಸಲು ಹಾಗೂ ಪೂರ್ಣಗೊಳಿಸಲು ಕನ್ನಡ ಕೂಟ ಲಕ್ಸೆಂಬರ್ಗ್  ಅನೇಕ ಕಾರ್ಯಕ್ರಮಗಳನ್ನು ಹಾಗೂ ಚಟುವಟಿಕೆಗಳನ್ನು ಆಯೋಜಿಸಲು ಯೋಚಿಸಿರುತ್ತದೆ. ಕಲೆ, ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ಕಲಿಯಲು ವೇದಿಕೆಯನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ.
ನಾವು ಆಯೋಜಿಸಲು ಯೋಚಿಸಿರುವ ಕೆಲವು ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ.

Kannada Koota Luxembourg plans to provide a forum for adults and children to speak the Kannada language and showcase their talent in arts, literature, sports, and cultural activities through the below-listed events. These activities go a long way in educating the younger generation about the rich culture and heritage of Karnataka state and for the adults to promote, preserve and stay connected to “Kannada” roots. 

ಹಬ್ಬ ಆಚರಣೆ

ಕರ್ನಾಟಕದ ಪ್ರತಿಯೊಂದು ಹಬ್ಬವೂ ಹಿಂದಿನ ಆಡಳಿತಗಾರರ ಮತ್ತು ಸಾಮ್ರಾಜ್ಯಗಳ ಇತಿಹಾಸವನ್ನು ವಿವರಿಸಲು ಒಂದು ಕಥೆಯನ್ನು ಹೊಂದಿದೆ.  ಇಲ್ಲಿ ಸಂಸ್ಕೃತಿ ಮತ್ತು ಆಚರಣೆಗಳಿಗೆ ಹೆಚ್ಚಿನ ಮೌಲ್ಯವನ್ನು ನೀಡಲಾಗಿದೆ. ಗಣೇಶ ಚತುರ್ಥಿ, ದಸರಾ, ದೀಪಾವಳಿ, ಸಂಕ್ರಾಂತಿ ಮತ್ತು ಯುಗಾದಿಯ ತರಹ  ಕರ್ನಾಟಕದ ವಿವಿಧ ಭಾಗಗಳಲ್ಲಿ ವಿಶಿಷ್ಟವಾಗಿ ಆಚರಣೆಯಲ್ಲಿರುವ ಪದ್ಧತಿಗಳು, ಸಂಪ್ರದಾಯಗಳು ಮತ್ತು ಆಚರಣೆಗಳನ್ನು “ಹಬ್ಬ ಅಚರಣೆ” ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗುತ್ತದೆ.

The festivals in Karnataka are similar to those celebrated across India – Ganesha Chaturthi, Dasara, Deepavali, Sankranti and Ugadi (to list a few). However, the customs, traditions and ceremonies that are uniquely practised in different parts of Karnataka will be showcased during “Habba achrarane” events.

ಕ್ರೀಡಾ ಕೂಟ

ಸಾಂಪ್ರದಾಯಿಕ ಆಟಗಳು ಯಾವಾಗಲೂ ಕರ್ನಾಟಕದ ಶ್ರೀಮಂತ ಸಂಸ್ಕೃತಿಯ ಭಾಗವಾಗಿದೆ.  ಕರ್ನಾಟಕದಲ್ಲಿ ಪಾರಂಪರಿಕವಾದ ವಿವಿಧ ಒಳಾಂಗಣ, ಹೊರಾಂಗಣ ಆಟಗಳಿವೆ.  ಇಂತಹ ಅನೇಕ ಆಸಕ್ತಿದಾಯಕ  ಆಟಗಳನ್ನು ಪುನರುಜ್ಜೀವನಗೊಳಿಸುವುದು ಹಾಗೂ ಮಕ್ಕಳಿಗೆ ಹೇಳಿಕೊಡುವುದು ನಮ್ಮ ಅಭಿಲಾಷೆ.
ಚಿನ್ನಿ ದಾಂಡು , ಬುಗುರಿ , ಗೋಲಿ, ಕಬಡ್ಡಿ , ಪಗಡೆ, ಚೌಕಾ ಬಾರಾ, ಅಳಿ ಗುಳಿ ಮಣೆ ಮತ್ತು ಇನ್ನೂ ಅನೇಕ ಆಟಗಳನ್ನು ಕ್ರೀಡಾ ಕೂಟದ ಮೂಲಕ ಸದಸ್ಯರು ಆನಂದಿಸಬಹುದು.

There are a variety of indoor, outdoor and board games that are popular in Karnataka. Chinni Dandu, Buguri (Spinning the top), Goli (Marbles), Kabaddi, Pagade, Chowka Bara, alguli mane and many more. Through Kreeda Koota – we can enjoy these games.

ಕನ್ನಡ ಕಲಿಕೆ

ಲಕ್ಸೆಂಬರ್ಗ್‌ನಲ್ಲಿ ವಾಸಿಸುವ ಕನ್ನಡದ ಮಕ್ಕಳಿಗೆ ಭಾಷೆ ಮಾತನಾಡುವುದನ್ನು ಮತ್ತು ಬರೆಯುವುದನ್ನು ಕಲಿಸುವುದು ಈ ಚಟುವಟಿಕೆಯ ಉದ್ದೇಶ.  ಕಾಲ ಕಾಲಕ್ಕೆ ಸದಸ್ಯರ ಮನೋರಂಜನೆಗಾಗಿ “ಹರಟೆ ಕಟ್ಟೆ” ಕಾರ್ಯಕ್ರಮ ಆಯೋಜಿಸುವ ಉದ್ದೇಶವನ್ನೂ ಹೊಂದಿದ್ದೇವೆ.

The focus of this activity is to teach the spoken and written “Kannada” to interested children living in Luxembourg. From time to time, we do intend to organize a “Harate katte” for adults too.

ಮೈತ್ರಿ

KKL ಲಕ್ಸಂಬರ್ಗ್, ಯುರೋಪ್ ಅಥವಾ ಪ್ರಪಂಚದ ಇತರ ಭಾಗಗಳಲ್ಲಿ ಇರುವ ಕನ್ನಡ ಅಥವಾ ಭಾರತೀಯ  ಸಾಂಸ್ಕೃತಿಕ ಸಂಘಗಳೊಂದಿಗೆ ಸಹಯೋಗ / ಪಾಲುದಾರಿಕೆ ಮಾಡಲು ಶ್ರಮಿಸುತ್ತದೆ. ಇದರಿಂದಾಗಿ KKL ಸದಸ್ಯರು ವಿವಿಧ ಸಂಘಟನೆಗಳಲ್ಲಿ ಭಾಗವಹಿಸುವ ಮೂಲಕ ವಿಶಾಲ ಸಮುದಾಯಕ್ಕೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು.

KKL strives to collaborate / partner with similar associations in Luxembourg or Europe or the rest of the world so that KKL members can showcase their talents to the wider community through participation in various events.

ಶ್ಲೋಕ ವಾಚನ

ಶ್ಲೋಕಗಳು, ಪುರಾಣಗಳು, ಇತಿಹಾಸಗಳ ಮೌಲ್ಯಾಧಾರಿತ ಕಥೆಗಳು , ಭಜನೆಗಳು ಮತ್ತು ಇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಬಲವಾದ ಸಾಂಸ್ಕೃತಿಕ ಅಡಿಪಾಯವನ್ನು ನಿರ್ಮಿಸುಬಹುದು. 
 KKL ಸದಸ್ಯರು  ಸರಳ ಸಾಂಪ್ರದಾಯಿಕ  ಕಾರ್ಯಕ್ರಮಗಳು  ಹಾಗೂ ಭಜನೆಗಳಲ್ಲಿ ಪಾಲ್ಗೊಳ್ಳಬಹುದು.

A strong cultural foundation can be built in children through Shlokas, Puranas, historical value stories, Bhajans and other activities.
KKL members can participate in simple traditional programs and Bhajans.

ಆಹಾರ ಮೇಳ

 ಆಹಾರವು ಯಾವುದೇ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುತ್ತದೆ. ಕರ್ನಾಟಕದ ವೈವಿಧ್ಯಮಯ ರುಚಿಕರವಾದ ತಿಂಡಿ ತಿನಿಸುಗಳನ್ನು ಪರಿಚಯಿಸುವುದು ಇದರ ಉದ್ದೇಶ.  ಆಹಾರ ಮೇಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಸಂತೋಷದಿಂದ ರುಚಿಕರವಾದ ಆಹಾರವನ್ನು ಸವಿಯಬಹುದು.

Food is an integral part of every culture and Karnataka has a wide variety of delicious food. Attendees can relish delightful food at “Aahara Mela”